ವಿಷಯಕ್ಕೆ ಹೋಗು

ಗಂಟು ನೊಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಬದಲಾವಣೆಗಳು
ಮಾಹಿತಿ ಸೇರ್ಪಡೆ
 
೧೯ ನೇ ಸಾಲು: ೧೯ ನೇ ಸಾಲು:
'''ಗಂಟು ನೊಣ'''ವು ಒಂದು ಬಗೆಯ ಹಾರುವ ಸಣ್ಣ [[ಕೀಟ]].
'''ಗಂಟು ನೊಣ'''ವು ಒಂದು ಬಗೆಯ ಹಾರುವ ಸಣ್ಣ [[ಕೀಟ]].


ಇದು [[ಡಿಪ್ಟರ]] ಗಣದ ಸಿಸಿಡೊಮೈಯಿಡೆ (Cecidomyiidae) ಕುಟುಂಬಕ್ಕೆ ಸೇರಿದೆ. ಹಲವು [[ಜಾತಿ (ಜೀವಶಾಸ್ತ್ರ)|ಜಾತಿ]] ಮತ್ತು ಪ್ರಭೇದಗಳು ಹಲವು ತರಹದ [[ಸಸ್ಯ|ಸಸ್ಯಗಳಲ್ಲಿ]] ಬದುಕುತ್ತವೆ. [[ಭತ್ತ|ಬತ್ತದ]] ಮತ್ತು [[ಮೆಕ್ಕೆ ಜೋಳ|ಮುಸುಕಿನ ಜೋಳದ]] ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್‌ಗಳನ್ನು [[:en:Orseolia_oryzae|ಓರ್ಸಿಯೋಲಿಯ ಓರೈಝ]], [[ಬಸವನಪಾದ|ಬಸವನಪಾದದ]] [[ಮರ|ಮರದಲ್ಲಿ]] ಬದುಕುವ ಮಿಡ್ಜ್‌ಗಳನ್ನು [[:en:Paradiplosis_tumifex|ಪ್ಯಾರಡಿಪ್ಲೋಸೀಸ್ ಟ್ಯಮಿಫೆಕ್ಸ್]], [[ಕಿತ್ತಳೆ (ಹಣ್ಣು)|ಕಿತ್ತಳೆ]] ಜಾತಿಯ ಗಿಡಗಳಲ್ಲಿ ಬೆಳೆಯುವವನ್ನು ಪ್ರಾಡಿಪ್ಲೋಸೀಸ್ ಲಾಂಜಿಫೈಲಾ (Prodiplosis longifila) ಎಂದು ಕರೆಯಲಾಗುತ್ತದೆ. [[ಪೆಡಿಕ್ಯೂಲಿಡೀ|ಹೇನುಗಳು]] ವಾಸಿಸುವ ಸಸ್ಯಗಳಲ್ಲಿಯೂ ಸಹ ಇವು ವಾಸಿಸುತ್ತವೆ. ಸಸ್ಯಗಳಲ್ಲಿ ಪ್ರೌಢ ಮಿಡ್ಜ್‌ಗಳು [[ಗಂಟು (ಸಸ್ಯಶಾಸ್ತ್ರ)|ಗಂಟು]] ಉಂಟುಮಾಡುತ್ತವೆ.
ಇದು [[ಡಿಪ್ಟರ]] ಗಣದ ಸಿಸಿಡೊಮೈಯಿಡೆ (Cecidomyiidae) ಕುಟುಂಬಕ್ಕೆ ಸೇರಿದೆ. ಹಲವು [[ಜಾತಿ (ಜೀವಶಾಸ್ತ್ರ)|ಜಾತಿ]] ಮತ್ತು ಪ್ರಭೇದಗಳು ಹಲವು ತರಹದ [[ಸಸ್ಯ|ಸಸ್ಯಗಳಲ್ಲಿ]] ಬದುಕುತ್ತವೆ. [[ಭತ್ತ|ಬತ್ತದ]] ಮತ್ತು [[ಮೆಕ್ಕೆ ಜೋಳ|ಮುಸುಕಿನ ಜೋಳದ]] ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್‌ಗಳನ್ನು [[:en:Orseolia_oryzae|ಓರ್ಸಿಯೋಲಿಯ ಓರೈಝ]], [[ಬಸವನಪಾದ|ಬಸವನಪಾದದ]] [[ಮರ|ಮರದಲ್ಲಿ]] ಬದುಕುವ ಮಿಡ್ಜ್‌ಗಳನ್ನು [[:en:Paradiplosis_tumifex|ಪ್ಯಾರಡಿಪ್ಲೋಸೀಸ್ ಟ್ಯಮಿಫೆಕ್ಸ್]], [[ಕಿತ್ತಳೆ (ಹಣ್ಣು)|ಕಿತ್ತಳೆ]] ಜಾತಿಯ ಗಿಡಗಳಲ್ಲಿ ಬೆಳೆಯುವವನ್ನು ಪ್ರಾಡಿಪ್ಲೋಸೀಸ್ ಲಾಂಜಿಫೈಲಾ (Prodiplosis longifila) ಎಂದು ಕರೆಯಲಾಗುತ್ತದೆ. [[ಪೆಡಿಕ್ಯೂಲಿಡೀ|ಹೇನುಗಳು]] ವಾಸಿಸುವ ಸಸ್ಯಗಳಲ್ಲಿಯೂ ಸಹ ಇವು ವಾಸಿಸುತ್ತವೆ. ಸಸ್ಯಗಳಲ್ಲಿ ಪ್ರೌಢ ಮಿಡ್ಜ್‌ಗಳು [[ಗಂಟು (ಸಸ್ಯಶಾಸ್ತ್ರ)|ಗಂಟು]] ಉಂಟುಮಾಡುತ್ತವೆ.

ವಿಶ್ವಾದ್ಯಂತ ಇದರ ೬,೬೫೦ಕ್ಕಿಂತ ಹೆಚ್ಚು ಪ್ರಭೇದಗಳು ಮತ್ತು ೮೩೦ಕ್ಕಿಂತ ಹೆಚ್ಚು ಜಾತಿಗಳನ್ನು ವಿವರಿಸಲಾಗಿದೆ. ಆದರೆ ಇದು ಖಂಡಿತವಾಗಿಯೂ ಈ ಕುಟುಂಬದ ವಾಸ್ತವಿಕ ವೈವಿಧ್ಯದ ಕೀಳಂದಾಜಾಗಿದೆ.<ref name="gagne2022">{{Cite Q|Q109561625}}</ref>


== ದೇಹರಚನೆ ==
== ದೇಹರಚನೆ ==
ಹೆಣ್ಣು ಮಿಡ್ಜ್ ಕೆಂಪು ವರ್ಣದ [[ಉದರ|ಉದರವನ್ನು]] ಹೊಂದಿದೆ. ಗಂಡಿನ ದೇಹವು ತಿಳಿಹಳದಿ ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಗಂಡು ಮಿಡ್ಜ್ ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ. ಎರಡು ಜೊತೆ [[ರೆಕ್ಕೆ|ರೆಕ್ಕೆಗಳನ್ನು]] ಹೊಂದಿದ್ದು 3 ರಿಂದ 3.5 ಮಿಮೀ ವಿಸ್ತಾರವಾಗಿರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಸಹ 10 ಕ್ಕಿಂತ ಹೆಚ್ಚು ಖಂಡಗಳಿರುವ ಮಣಿಸರದಾಕಾರದ [[:en:Antenna_(biology)|ಸ್ಪರ್ಶಾಂಗಗಳನ್ನು]] ಹೊಂದಿವೆ.
ಹೆಣ್ಣು ಮಿಡ್ಜ್ ಕೆಂಪು ವರ್ಣದ [[ಉದರ|ಉದರವನ್ನು]] ಹೊಂದಿದೆ. ಗಂಡಿನ ದೇಹವು ತಿಳಿಹಳದಿ ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಗಂಡು ಮಿಡ್ಜ್ ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ. ಎರಡು ಜೊತೆ [[ರೆಕ್ಕೆ|ರೆಕ್ಕೆಗಳನ್ನು]] ಹೊಂದಿದ್ದು 3 ರಿಂದ 3.5 ಮಿಮೀ ವಿಸ್ತಾರವಾಗಿರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಸಹ 10 ಕ್ಕಿಂತ ಹೆಚ್ಚು ಖಂಡಗಳಿರುವ ಮಣಿಸರದಾಕಾರದ [[:en:Antenna_(biology)|ಸ್ಪರ್ಶಾಂಗಗಳನ್ನು]] ಹೊಂದಿವೆ.

ಇದು [[ಸೊಳ್ಳೆ|ಸೊಳ್ಳೆಗಳನ್ನು]] ಹೋಲುತ್ತದೆ. ಅನೇಕ ಬಗೆಯ ಗಂಟು ನೊಣಗಳಿವೆ. ಉದ್ದವಾದ ಮಣಿಸರದಂತಿರುವ ಕುಡಿಮೀಸೆಗಳು, ಮೀಸೆಗಳ ಮೇಲೆ ಇರುವ ಬಿರುಸು [[ಕೂದಲು]], ಸರಳ ರೀತಿಯ ಕಾಂಡಗಳುಳ್ಳ ಎರಡು ರೆಕ್ಕೆಗಳು ಇವುಗಳ ವಿಶೇಷ ಲಕ್ಷಣಗಳು.

== ಆಹಾರ ==
ಪ್ರೌಢಕೀಟಗಳು ಸಸ್ಯಾಹಾರಿಗಳು. ಕೆಲವು ಪ್ರಭೇದಗಳು ಆರ್ಥಿಕ ಮಹತ್ತ್ವವಿರುವ ಹಲವಾರು ಸಸ್ಯಗಳ ಮೇಲೆ [[ಪರಜೀವಿಕೆ|ಪರಾವಲಂಬಿಗಳಾಗಿದ್ದು]] ಗಂಟುಗಳ ಉತ್ಪನ್ನಕ್ಕೆ ಕಾರಣವಾಗುತ್ತವೆ. ಆದರೆ ಇವುಗಳ [[ಡಿಂಬ(ಲಾರ್ವಾ)|ಡಿಂಬಗಳು]] ತಮ್ಮ ಆಹಾರ ಸೇವನೆಯಲ್ಲಿ ಪ್ರೌಢ ಕೀಟಗಳಿಂದ ಬೇರೆಯಾಗಿವೆ. ಕೆಲವು ಬಗೆಗಳ ಡಿಂಬಗಳು ಬೇರೆ ಬಗೆಯ ಕೀಟಗಳನ್ನು ಮುಖ್ಯವಾಗಿ [[ತಿಗಣೆ]] ಮತ್ತು [[ನುಸಿ|ನುಸಿಗಳನ್ನು]] ತಿನ್ನುತ್ತವೆ. ಇನ್ನು ಕೆಲವು ಬಗೆಯ ಡಿಂಬಗಳು, ಕೊಳೆಯುತ್ತಿರುವ ಸಸ್ಯಗಳನ್ನು ತಿಂದು ಜೀವಿಸುತ್ತವೆ.


== ಸಂತಾನೋತ್ಪತ್ತಿ ==
== ಸಂತಾನೋತ್ಪತ್ತಿ ==
೩೧ ನೇ ಸಾಲು: ೩೮ ನೇ ಸಾಲು:


ಕೋಶಾವಸ್ಥೆಯ ಕೊನೆಯ ಹಂತದ ಹುಳುವು ತಿಳಿ ಗುಲಾಬಿ ಬಣದ್ದಾಗಿದ್ದು ಉದರವು ಮುಳ್ಳುಗಳಿಂದ ಆವೃತಗೊಂಡಿರುತ್ತದೆ. ಪ್ರೌಢಾವಸ್ಥೆಗೆ ಬರುವುದರೊಳಗೆ ಕೆಂಪುಬಣ್ಣಕ್ಕೆ ತಿರುಗುತ್ತದೆ. ಕೊನೆಯ ಹಂತದಲ್ಲಿ ಹುಳುಗಳು 2-2.5 ಮಿಮೀ ಉದ್ದ ಹಾಗೂ 0.6-0.8 ಮಿಮೀ ದಪ್ಪವಿರುತ್ತವೆ. ಈ ಕೊನೆಯ ಹಂತದ ಬೆಳೆವಣಿಗೆಯು 2-8 ದಿವಸಗಳಲ್ಲಿ ಮುಗಿದು ಪ್ರೌಢಾವಸ್ಥೆಯ ಮಿಡ್ಜ್‌ಗಳಾಗಿ ಬೆಳೆಯುತ್ತವೆ. ಈ ಎಲ್ಲಾ ಬೆಳೆವಣಿಗೆಗಳೂ ಸಸ್ಯಗಳ ಗಂಟಿನಲ್ಲಿಯೇ ನಡೆಯುತ್ತವೆ.
ಕೋಶಾವಸ್ಥೆಯ ಕೊನೆಯ ಹಂತದ ಹುಳುವು ತಿಳಿ ಗುಲಾಬಿ ಬಣದ್ದಾಗಿದ್ದು ಉದರವು ಮುಳ್ಳುಗಳಿಂದ ಆವೃತಗೊಂಡಿರುತ್ತದೆ. ಪ್ರೌಢಾವಸ್ಥೆಗೆ ಬರುವುದರೊಳಗೆ ಕೆಂಪುಬಣ್ಣಕ್ಕೆ ತಿರುಗುತ್ತದೆ. ಕೊನೆಯ ಹಂತದಲ್ಲಿ ಹುಳುಗಳು 2-2.5 ಮಿಮೀ ಉದ್ದ ಹಾಗೂ 0.6-0.8 ಮಿಮೀ ದಪ್ಪವಿರುತ್ತವೆ. ಈ ಕೊನೆಯ ಹಂತದ ಬೆಳೆವಣಿಗೆಯು 2-8 ದಿವಸಗಳಲ್ಲಿ ಮುಗಿದು ಪ್ರೌಢಾವಸ್ಥೆಯ ಮಿಡ್ಜ್‌ಗಳಾಗಿ ಬೆಳೆಯುತ್ತವೆ. ಈ ಎಲ್ಲಾ ಬೆಳೆವಣಿಗೆಗಳೂ ಸಸ್ಯಗಳ ಗಂಟಿನಲ್ಲಿಯೇ ನಡೆಯುತ್ತವೆ.

ಗಂಟು ನೊಣದ ಡಿಂಬಗಳು, ಮತ್ತು ಅನೇಕ ಪ್ರೌಢ ಕೀಟಗಳು ಕ್ಯಾರೊಟಿನಾಯ್ಡ್‌ಗಳ ಕಾರಣದಿಂದ ಕಿತ್ತಳೆ ಅಥವಾ ಹಳದಿ ಬಣ್ಣ ಹೊಂದಿರುತ್ತವೆ.<ref>{{Cite journal|last1=Heath|first1=Jeremy J.|last2=Wells|first2=Brenda|last3=Cipollini|first3=Don|last4=Stireman|first4=John O.|date=2013|title=Carnivores and carotenoids are associated with adaptive behavioural divergence in a radiation of gall midges|url=https://onlinelibrary.wiley.com/doi/10.1111/j.1365-2311.2012.01397.x|journal=Ecological Entomology|language=en|volume=38|issue=1|pages=11–22|doi=10.1111/j.1365-2311.2012.01397.x|bibcode=2013EcoEn..38...11H|s2cid=85218179}}</ref>

ಪ್ಯೂಪಾದಲ್ಲಿ ಮುಂಭಾಗದ ಶ್ವಾಸದ್ವಾರ ಮತ್ತು ಸ್ಪರ್ಶಿಕೆಗಳ ತಳಗಳ ಮುಂಭಾಗದ ಕೋನ ಎದ್ದುಕಾಣುತ್ತವೆ.<ref>Gagné, R. J. 1981. Cecidomyiidae. In: McAlpine, J. F. et al. (eds.), ''Manual of Nearctic Diptera''. Vol. 1. Research Branch, Agriculture, Canada, Ottawa. pp. 257–292. [http://www.esc-sec.ca/aafcmono.php download here] {{Webarchive|url=https://web.archive.org/web/20131201030220/http://www.esc-sec.ca/aafcmono.php|date=2013-12-01}}</ref><ref>Mamaev, B.M. Family Cecidomyiidae in [[Grigory Bey-Bienko|Bei-Bienko, G. Ya]], 1988 ''Keys to the insects of the European Part of the USSR'' Volume 5 (Diptera) Part 2 English edition.Keys to Palaearctic species but now needs revision.</ref>

== ಪ್ರಮುಖ ಗಂಟು ನೊಣಗಳು ==
ಗಂಟು ನೊಣಗಳಲ್ಲಿ ಬಹಳ ಮುಖ್ಯವಾದವು ಮತ್ತು ವಿಶೇಷವಾಗಿ ಹಾನಿಕಾರಕವಾದವುಗಳೆಂದರೆ [[:en:Hessian_fly|ಹೆಸ್ಸಿಯನ್ ನೊಣದ]] ಮರಿ. ಇವು [[ಉತ್ತರ ಅಮೇರಿಕ|ಉತ್ತರ ಅಮೆರಿಕ]], [[ಯೂರೋಪ್]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜೀ಼ಲೆಂಡ್]] ಮುಂತಾದ ದೇಶಗಳಲ್ಲಿ [[ಗೋಧಿ]] [[ಬೆಳೆ|ಬೆಳೆಯನ್ನು]] ನಾಶಮಾಡುತ್ತವೆ.<ref name="Bridging">{{Cite journal|language=English|year=2004|location=[[Berlin]]/[[Heidelberg]], Germany|publisher=Springer Science+Business Media, Inc|department=Review Article|volume=30|issue=12|last=Kaloushian|s2cid=6156480|first=Isgouhi|pmid=15724964|pages=2419–2438|doi=10.1007/s10886-004-7943-1|title=Gene-for-gene disease resistance: Bridging insect pest and pathogen defense|journal=[[Journal of Chemical Ecology]]|oclc=299333697|lccn=75644091|issn=0098-0331|eissn=1573-1561}}</ref> ಯೂರೋಪಿನಲ್ಲಿ [[ಮರಸೇಬು|ಪಿಯರ್]] ಹಣ್ಣಿಗೆ ಬಹಳ ಹಾನಿಕಾರಕವಾಗಿದೆ. ಹೀಗೆಯೆ [[ಜೋಳ|ಜೋಳದ]] [[ತೆನೆ|ತೆನೆಯ]] ನೊಣವಾದ [[:en:Stenodiplosis_sorghicola|ಕಾಂಟರಿನಿಯ ಆಂಡ್ರೋಪೂಗೋನಿಸ್]] [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಪೈರಿಗೆ ಹಾನಿಯನ್ನುಂಟುಮಾಡುತ್ತದೆ.


== ಉಲ್ಲೇಖಗಳು ==
== ಉಲ್ಲೇಖಗಳು ==
೩೬ ನೇ ಸಾಲು: ೫೦ ನೇ ಸಾಲು:


== ಹೊರಗಿನ ಕೊಂಡಿಗಳು ==
== ಹೊರಗಿನ ಕೊಂಡಿಗಳು ==

* [http://www.diptera.info/photogallery.php?album_id=7 Diptera.info images]
* [http://www.diptera.info/photogallery.php?album_id=7 Diptera.info images]
* [http://delta-intkey.com/britin/dip/www/cecidomy.htm Family description and images] at delta-intkey.com
* [http://delta-intkey.com/britin/dip/www/cecidomy.htm Family description and images] at delta-intkey.com

{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಲ್ ಮಿಡ್ಜ್}}

{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂಟು ನೊಣ}}


[[ವರ್ಗ:ಕೀಟಗಳು]]
[[ವರ್ಗ:ಕೀಟಗಳು]]

೨೨:೩೩, ೭ ಆಗಸ್ಟ್ ೨೦೨೪ ದ ಇತ್ತೀಚಿನ ಆವೃತ್ತಿ

ಗಂಟು ನೊಣ
Temporal range: Late Jurassic–Recent
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಡಿಪ್ಟರ
ಉಪಗಣ: ನೆಮಟೊಸೆರಾ
ಕೆಳಗಣ: ಬಿಬಿಯೋನೊಮೊರ್ಫ಼ಾ
ಮೇಲ್ಕುಟುಂಬ: ಸ್ಕಿಯಾರಾಯ್ಡೀ
ಕುಟುಂಬ: ಸೆಸಿಡೊಮೈಯಿಡೀ
Newman, 1835
ಉಪಕುಟುಂಬಗಳು
  • ಕ್ಯಾಟೊಟ್ರೈಕಿನೇ
  • ಸೆಸಿಡೊಮೈಯಿನೇ
  • ಲೆಸ್ಟ್ರೆಮೈಯಿನೇ
  • ಮೈಕ್ರೋಮೈಯಿನೇ[]
  • ಪಾರಿಕಾಂಡೈಲಿನೇ
  • ವಿನರ್‌ಟ್ಝೈಯಿನೇ[]
Synonyms
  • ಸೆಸಿಡೊಮೈಯಿಡೀ (ಸಾಮಾನ್ಯ ತಪ್ಪು ಕಾಗುಣಿತ)[]
  • ಐಟೊನಿಡಿಡೇ

ಗಂಟು ನೊಣವು ಒಂದು ಬಗೆಯ ಹಾರುವ ಸಣ್ಣ ಕೀಟ.

ಇದು ಡಿಪ್ಟರ ಗಣದ ಸಿಸಿಡೊಮೈಯಿಡೆ (Cecidomyiidae) ಕುಟುಂಬಕ್ಕೆ ಸೇರಿದೆ. ಹಲವು ಜಾತಿ ಮತ್ತು ಪ್ರಭೇದಗಳು ಹಲವು ತರಹದ ಸಸ್ಯಗಳಲ್ಲಿ ಬದುಕುತ್ತವೆ. ಬತ್ತದ ಮತ್ತು ಮುಸುಕಿನ ಜೋಳದ ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್‌ಗಳನ್ನು ಓರ್ಸಿಯೋಲಿಯ ಓರೈಝ, ಬಸವನಪಾದದ ಮರದಲ್ಲಿ ಬದುಕುವ ಮಿಡ್ಜ್‌ಗಳನ್ನು ಪ್ಯಾರಡಿಪ್ಲೋಸೀಸ್ ಟ್ಯಮಿಫೆಕ್ಸ್, ಕಿತ್ತಳೆ ಜಾತಿಯ ಗಿಡಗಳಲ್ಲಿ ಬೆಳೆಯುವವನ್ನು ಪ್ರಾಡಿಪ್ಲೋಸೀಸ್ ಲಾಂಜಿಫೈಲಾ (Prodiplosis longifila) ಎಂದು ಕರೆಯಲಾಗುತ್ತದೆ. ಹೇನುಗಳು ವಾಸಿಸುವ ಸಸ್ಯಗಳಲ್ಲಿಯೂ ಸಹ ಇವು ವಾಸಿಸುತ್ತವೆ. ಸಸ್ಯಗಳಲ್ಲಿ ಪ್ರೌಢ ಮಿಡ್ಜ್‌ಗಳು ಗಂಟು ಉಂಟುಮಾಡುತ್ತವೆ. ಈ ಕುಟುಂಬಕ್ಕೆ ಸೇರಿದ ಕೆಲವು ಗಂಟು ನೊಣಗಳು ವಿಚಿತ್ರ ವಿದ್ಯಮಾನವಾದ ಶಿಶು ಸಂತಾನೋತ್ಪತ್ತಿಗೆ ಕೂಡ ಪರಿಚಿತವಾಗಿವೆ. ಇದರಲ್ಲಿ ಡಿಂಬದ ಹಂತವು ಪ್ರೌಢಾವಸ್ಥೆಗೆ ಬರುವ ಮೊದಲೇ ಸಂತಾನೋತ್ಪತ್ತಿಯಲ್ಲಿ ತೊಡಗುತ್ತದೆ.[][]

ವಿಶ್ವಾದ್ಯಂತ ಇದರ ೬,೬೫೦ಕ್ಕಿಂತ ಹೆಚ್ಚು ಪ್ರಭೇದಗಳು ಮತ್ತು ೮೩೦ಕ್ಕಿಂತ ಹೆಚ್ಚು ಜಾತಿಗಳನ್ನು ವಿವರಿಸಲಾಗಿದೆ. ಆದರೆ ಇದು ಖಂಡಿತವಾಗಿಯೂ ಈ ಕುಟುಂಬದ ವಾಸ್ತವಿಕ ವೈವಿಧ್ಯದ ಕೀಳಂದಾಜಾಗಿದೆ.[]

ದೇಹರಚನೆ

[ಬದಲಾಯಿಸಿ]

ಹೆಣ್ಣು ಮಿಡ್ಜ್ ಕೆಂಪು ವರ್ಣದ ಉದರವನ್ನು ಹೊಂದಿದೆ. ಗಂಡಿನ ದೇಹವು ತಿಳಿಹಳದಿ ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಗಂಡು ಮಿಡ್ಜ್ ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ. ಎರಡು ಜೊತೆ ರೆಕ್ಕೆಗಳನ್ನು ಹೊಂದಿದ್ದು 3 ರಿಂದ 3.5 ಮಿಮೀ ವಿಸ್ತಾರವಾಗಿರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಸಹ 10 ಕ್ಕಿಂತ ಹೆಚ್ಚು ಖಂಡಗಳಿರುವ ಮಣಿಸರದಾಕಾರದ ಸ್ಪರ್ಶಾಂಗಗಳನ್ನು ಹೊಂದಿವೆ.

ಇದು ಸೊಳ್ಳೆಗಳನ್ನು ಹೋಲುತ್ತದೆ. ಅನೇಕ ಬಗೆಯ ಗಂಟು ನೊಣಗಳಿವೆ. ಉದ್ದವಾದ ಮಣಿಸರದಂತಿರುವ ಕುಡಿಮೀಸೆಗಳು, ಮೀಸೆಗಳ ಮೇಲೆ ಇರುವ ಬಿರುಸು ಕೂದಲು, ಸರಳ ರೀತಿಯ ಕಾಂಡಗಳುಳ್ಳ ಎರಡು ರೆಕ್ಕೆಗಳು ಇವುಗಳ ವಿಶೇಷ ಲಕ್ಷಣಗಳು.

ಪ್ರೌಢಕೀಟಗಳು ಸಸ್ಯಾಹಾರಿಗಳು. ಕೆಲವು ಪ್ರಭೇದಗಳು ಆರ್ಥಿಕ ಮಹತ್ತ್ವವಿರುವ ಹಲವಾರು ಸಸ್ಯಗಳ ಮೇಲೆ ಪರಾವಲಂಬಿಗಳಾಗಿದ್ದು ಗಂಟುಗಳ ಉತ್ಪನ್ನಕ್ಕೆ ಕಾರಣವಾಗುತ್ತವೆ. ಆದರೆ ಇವುಗಳ ಡಿಂಬಗಳು ತಮ್ಮ ಆಹಾರ ಸೇವನೆಯಲ್ಲಿ ಪ್ರೌಢ ಕೀಟಗಳಿಂದ ಬೇರೆಯಾಗಿವೆ. ಕೆಲವು ಬಗೆಗಳ ಡಿಂಬಗಳು ಬೇರೆ ಬಗೆಯ ಕೀಟಗಳನ್ನು ಮುಖ್ಯವಾಗಿ ತಿಗಣೆ ಮತ್ತು ನುಸಿಗಳನ್ನು ತಿನ್ನುತ್ತವೆ. ಇನ್ನು ಕೆಲವು ಬಗೆಯ ಡಿಂಬಗಳು, ಕೊಳೆಯುತ್ತಿರುವ ಸಸ್ಯಗಳನ್ನು ತಿಂದು ಜೀವಿಸುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ನಿಶಾಚಾರಿಗಳಾಗಿದ್ದು ರಾತ್ರಿ ಸಮಯದಲ್ಲಿ ಸುಲಭವಾಗಿ ದೀಪದ ಬೆಳಕಿನ ಸಹಾಯದಿಂದ ಹಿಡಿಯಬಹುದು. ಕೊನೆಯ ಕೋಶಾವಸ್ಥೆಯಿಂದ (ಪ್ಯುಪ) ಹೊರಬಂದ ತಕ್ಷಣವೆ ಪ್ರೌಢ ಮಿಡ್ಜ್‌ಗಳು ಸಮ್ಮಿಲನದಲ್ಲಿ (ಸಂತಾನಕ್ರಿಯೆ) ತೊಡಗುವುದು ಒಂದು ವಿಶಿಷ್ಟ ಲಕ್ಷಣ. ಆದರೆ ಹೆಣ್ಣು ಮಿಡ್ಜ್ ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ಸಂತಾನಕ್ರಿಯೆಯಲ್ಲಿ ಭಾಗಿಯಾಗಿರುತ್ತದೆ. ಒಂದು ಹೆಣ್ಣು ಮಿಡ್ಜ್ 100-200 ಮೊಟ್ಟೆಗಳನ್ನು ಅದರ ಜೀವಿತಾವಧಿ ದಿವಸಗಳಲ್ಲಿ ಇಡುತ್ತದೆ. ಗಂಡು ಮಿಡ್ಜ್ ಮಾತ್ರ ಸಮ್ಮಿಲನ ಕ್ರಿಯೆ ಮುಗಿದ 12 ರಿಂದ 18 ಗಂಟೆಗಳ ಒಳಗೆ ಸಾಯುತ್ತದೆ. ಮೊಟ್ಟೆಗಳು ಉದ್ದವಾದ ಕೊಳವೆಯಾಕಾರದಲ್ಲಿರುತ್ತವೆ. ಆಗ ತಾನೇ ಹೊಸದಾಗಿ ಇಟ್ಟಿದ್ದ ಮೊಟ್ಟೆಗಳಲ್ಲಿ ವರ್ಣವೈವಿಧ್ಯವಿದೆ. ಶ್ವೇತ, ಗುಲಾಬಿ, ಕೆಂಪು ಮತ್ತು ಹಳದಿ ಬಣ್ಣಬರಬಹುದು. ಹುಳುಗಳು ಮೊಟ್ಟೆಯಿಂದ ಹೊರಬರುವ ಮುನ್ನ, ಆ ಮೊಟ್ಟೆಗಳು ಶಿಲಾರಾಶಿಯಂತೆ ಹೊಳೆಯುತ್ತಿರುತ್ತವೆ. ಒಂದು ಅಥವಾ 3-4 ಮೊಟ್ಟೆಗಳ ಗುಂಪುಗಳು ಬತ್ತದ ಚಿಗುರೊಡೆಯುವ ಗಿಣ್ಣುಗಳಲ್ಲಿ, ಎಲೆಯ ತಳದ ಭಾಗಗಳಲ್ಲಿ ಹಾಗೂ ಎಲೆಯ ಮೇಲ್ಭಾಗಗಳಲ್ಲಿ ಕಂಡು ಬರುತ್ತವೆ. ಮೊಟ್ಟೆಗಳ ಬೆಳೆವಣಿಗೆ 3-4 ದಿವಸಗಳಲ್ಲಿ ಮುಗಿಯುತ್ತದೆ.

ಕೋಶಾವಸ್ಥೆ

[ಬದಲಾಯಿಸಿ]

ಮಿಡ್ಜ್‌ಗಳ ಕೋಶಾವಸ್ಥೆಯ ಮೊದಲ ಹುಳು ಕಾಲುಗಳಿಲ್ಲದ 1ಮಿಮೀ ಉದ್ದದ ಬೂದು ಅಥವಾ ಶ್ವೇತವರ್ಣದ್ದಾಗಿರುತ್ತದೆ. ಈ ಹುಳುಗಳು ಕಾಂಡದಲ್ಲಿ ಚಿಗುರು ಬರುವ ಅಥವಾ ಗಿಣ್ಣುಗಳಿರುವ ಜಾಗದಲ್ಲಿ ಆಹಾರಕ್ಕಾಗಿ ನೆಲೆಸಿರುತ್ತವೆ. ಒಂದು ಗಿಣ್ಣಿನಲ್ಲಿ ಒಂದು ಹುಳು ಮಾತ್ರ ಇರುತ್ತದೆ. ಈ ಹುಳುಗಳು ಗಿಣ್ಣಿನ ಬುಡವನ್ನು ತಿನ್ನುತ್ತಾ ಹೋಗುತ್ತವೆ. ಕೊನೆಗೆ ಕೊಳವೆಯಾಕಾರದ ಗಂಟು ಉತ್ಪತ್ತಿಯಾಗುತ್ತದೆ. ಈ ಗಂಟುಗಳು ಸಸ್ಯಗಳು ಚಿಗುರು ಒಡೆಯುವುದನ್ನು ಹಾಗೂ ಎಲೆಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ. ಎಡೆಬಿಡದೆ ಚಿಗುರು ಒಡೆಯುವ ತಳವನ್ನು ಹಾಗೂ ಕಾಂಡವನ್ನು ತಿನ್ನುವ ಹುಳುವಿನಿಂದ ಗಂಟು ದೊಡ್ಡದಾಗುತ್ತಾ ಹೋಗುತ್ತದೆ. ಕೋಶಾವಸ್ಥೆಯ ಹುಳುಗಳ ಬೆಳೆವಣಿಗೆಯೂ 3-4 ಹಂತದಲ್ಲಿದ್ದು 15-20 ದಿವಸಗಳಲ್ಲಿ ಕೋಶಾವಸ್ಥೆಯ ಕೊನೆಯ ಹಂತ ತಲುಪುತ್ತವೆ.

ಕೋಶಾವಸ್ಥೆಯ ಕೊನೆಯ ಹಂತದ ಹುಳುವು ತಿಳಿ ಗುಲಾಬಿ ಬಣದ್ದಾಗಿದ್ದು ಉದರವು ಮುಳ್ಳುಗಳಿಂದ ಆವೃತಗೊಂಡಿರುತ್ತದೆ. ಪ್ರೌಢಾವಸ್ಥೆಗೆ ಬರುವುದರೊಳಗೆ ಕೆಂಪುಬಣ್ಣಕ್ಕೆ ತಿರುಗುತ್ತದೆ. ಕೊನೆಯ ಹಂತದಲ್ಲಿ ಹುಳುಗಳು 2-2.5 ಮಿಮೀ ಉದ್ದ ಹಾಗೂ 0.6-0.8 ಮಿಮೀ ದಪ್ಪವಿರುತ್ತವೆ. ಈ ಕೊನೆಯ ಹಂತದ ಬೆಳೆವಣಿಗೆಯು 2-8 ದಿವಸಗಳಲ್ಲಿ ಮುಗಿದು ಪ್ರೌಢಾವಸ್ಥೆಯ ಮಿಡ್ಜ್‌ಗಳಾಗಿ ಬೆಳೆಯುತ್ತವೆ. ಈ ಎಲ್ಲಾ ಬೆಳೆವಣಿಗೆಗಳೂ ಸಸ್ಯಗಳ ಗಂಟಿನಲ್ಲಿಯೇ ನಡೆಯುತ್ತವೆ.

ಗಂಟು ನೊಣದ ಡಿಂಬಗಳು, ಮತ್ತು ಅನೇಕ ಪ್ರೌಢ ಕೀಟಗಳು ಕ್ಯಾರೊಟಿನಾಯ್ಡ್‌ಗಳ ಕಾರಣದಿಂದ ಕಿತ್ತಳೆ ಅಥವಾ ಹಳದಿ ಬಣ್ಣ ಹೊಂದಿರುತ್ತವೆ.[]

ಪ್ಯೂಪಾದಲ್ಲಿ ಮುಂಭಾಗದ ಶ್ವಾಸದ್ವಾರ ಮತ್ತು ಸ್ಪರ್ಶಿಕೆಗಳ ತಳಗಳ ಮುಂಭಾಗದ ಕೋನ ಎದ್ದುಕಾಣುತ್ತವೆ.[][]

ಪ್ರಮುಖ ಗಂಟು ನೊಣಗಳು

[ಬದಲಾಯಿಸಿ]

ಗಂಟು ನೊಣಗಳಲ್ಲಿ ಬಹಳ ಮುಖ್ಯವಾದವು ಮತ್ತು ವಿಶೇಷವಾಗಿ ಹಾನಿಕಾರಕವಾದವುಗಳೆಂದರೆ ಹೆಸ್ಸಿಯನ್ ನೊಣದ ಮರಿ. ಇವು ಉತ್ತರ ಅಮೆರಿಕ, ಯೂರೋಪ್ ಮತ್ತು ನ್ಯೂಜೀ಼ಲೆಂಡ್ ಮುಂತಾದ ದೇಶಗಳಲ್ಲಿ ಗೋಧಿ ಬೆಳೆಯನ್ನು ನಾಶಮಾಡುತ್ತವೆ.[೧೦] ಯೂರೋಪಿನಲ್ಲಿ ಪಿಯರ್ ಹಣ್ಣಿಗೆ ಬಹಳ ಹಾನಿಕಾರಕವಾಗಿದೆ. ಹೀಗೆಯೆ ಜೋಳದ ತೆನೆಯ ನೊಣವಾದ ಕಾಂಟರಿನಿಯ ಆಂಡ್ರೋಪೂಗೋನಿಸ್ ದಕ್ಷಿಣ ಭಾರತದ ಪೈರಿಗೆ ಹಾನಿಯನ್ನುಂಟುಮಾಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Gagné, Raymond; Jaschhof, Mathias (2017). "A Catalog of the Cecidomyiidae (Diptera) of the World, Fourth Edition" (PDF). Agricultural Research Service, US Department of Agriculture. Retrieved 2018-04-29.
  2. Mathias Jaschhof (2016). "A review of world Diallactiini (Diptera, Cecidomyiidae, Winnertziinae), with the description of six new genera and seventeen new species". Zootaxa. 4127 (2): 201–244. doi:10.11646/zootaxa.4127.2.1. PMID 27395622.
  3. "University of California, Riverside". Archived from the original on 2015-09-24. Retrieved 2013-01-04.
  4. Gagné, Raymond J.; Jaschhof, Mathias (2017). "A Catalog of the Cecidomyiidae (Diptera) of the World, Fourth Edition" (PDF). Agricultural Research Service, US Department of Agriculture. Retrieved 2018-03-27.
  5. Wyatt, I. J. (2009-04-02). "Pupal Paedogenesis in the Cecidomyiidae (Diptera).-I". Proceedings of the Royal Entomological Society of London. Series A, General Entomology (in ಇಂಗ್ಲಿಷ್). 36 (10–12): 133–143. doi:10.1111/j.1365-3032.1961.tb00259.x.
  6. Lua error in ಮಾಡ್ಯೂಲ್:Complex_date at line 203: assign to undeclared variable 'a'.
  7. Heath, Jeremy J.; Wells, Brenda; Cipollini, Don; Stireman, John O. (2013). "Carnivores and carotenoids are associated with adaptive behavioural divergence in a radiation of gall midges". Ecological Entomology (in ಇಂಗ್ಲಿಷ್). 38 (1): 11–22. Bibcode:2013EcoEn..38...11H. doi:10.1111/j.1365-2311.2012.01397.x. S2CID 85218179.
  8. Gagné, R. J. 1981. Cecidomyiidae. In: McAlpine, J. F. et al. (eds.), Manual of Nearctic Diptera. Vol. 1. Research Branch, Agriculture, Canada, Ottawa. pp. 257–292. download here Archived 2013-12-01 ವೇಬ್ಯಾಕ್ ಮೆಷಿನ್ ನಲ್ಲಿ.
  9. Mamaev, B.M. Family Cecidomyiidae in Bei-Bienko, G. Ya, 1988 Keys to the insects of the European Part of the USSR Volume 5 (Diptera) Part 2 English edition.Keys to Palaearctic species but now needs revision.
  10. Kaloushian, Isgouhi (2004). "Gene-for-gene disease resistance: Bridging insect pest and pathogen defense". Review Article. Journal of Chemical Ecology (in English). Berlin/Heidelberg, Germany: Springer Science+Business Media, Inc. 30 (12): 2419–2438. doi:10.1007/s10886-004-7943-1. eISSN 1573-1561. ISSN 0098-0331. LCCN 75644091. OCLC 299333697. PMID 15724964. S2CID 6156480.{{cite journal}}: CS1 maint: unrecognized language (link)

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: